Top News

ಗನ್ ತೋರಿಸಿ ಬಂಗಾರದ ಅಂಗಡಿ ಲೂಟಿ

ವಿಜಯಪುರ : ಜಿಲ್ಲೆಯ ಝಳಕಿ ಪೊಲೀಸ್ ಠಾಣೆ ವ್ಯಾಪ್ತಿಯ ಹಲಸಂಗಿ ಗ್ರಾಮದ ಭೂಮಿಕಾ ಜ್ಯೂವೆಲ್ಲರಿ ಅಂಗಡಿಗೆ ಇಬ್ಬರೂ ಅಪರಿಚಿತರು ನುಗ್ಗಿ ಅಂಗಡಿ ಮಾಲೀಕನಿಗೆ ಗನ್ ತೋರಿಸಿ 205ಗ್ರಾಂ ಬಂಗಾರದ ಆಭರಣ ಮತ್ತು ಒಂದು ಕೆಜಿ ಬೆಳ್ಳಿ ಲೂಟಿ ಮಾಡಿರುವ ಘಟನೆ ಸೋಮವಾರ ಜರುಗಿದೆ.

ಇಬ್ಬರು ಅಪರಿಚಿತರು ಕಪ್ಪು ಬಣ್ಣದ ಜಾಕೆಟ್ , ಕಪ್ಪು ಬಣ್ಣದ ಹೆಲ್ಮೆಟ್ ಧರಿಸಿಕೊಂಡು, ಕಪ್ಪು ಬಣ್ಣದ ಹೋಂಡಾ ಯೂನಿಕಾರ್ನ್ ಬೈಕ್ ಮೇಲೆ ಬಂದು, ಅಂಗಡಿ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಅಂಗಡಿಯ ಮಾಲೀಕನದ ಮಹಾರುದ್ರ ತಂದೆ ಸದಾಶಿವ ಕಂಚಗಾರ ಈತನಿಗೆ ಗನ್ ತೋರಿಸಿ ಲೂಟಿ ಮಾಡಿದ್ದಾರೆ. ಈ ಸಂದಭದಲ್ಲಿ , ಪಕ್ಕದ ಮೊಬೈಲ್ ಅಂಗಡಿಯವನಾದ, ಅನಿಲ್ ಬಸಣ್ಣ ಗಲಗಲಿ ತನ್ನ ಮೊಬೈಲ್‍ನಲ್ಲಿ  ಈ ಘಟನೆಯನ್ನು ಚಿತ್ರಿಕರಿಸಿದ್ದಾನೆ. ವಿಡಿಯೋ ರೆಕಾರ್ಡ್ ಮಾಡುತ್ತಿರುವುದನ್ನು ನೋಡಿದ ಅಪರಿಚಿತರು ಆ ವ್ಯಕ್ತಿಯ ಕಡೆಗೆ ಗುಂಡು ಹಾರಿಸಿದ್ದು ಅದು ಆ ವ್ಯಕ್ತಿಯ ಪಕ್ಕದಲ್ಲೇ ಇದ್ದ 18 ವರ್ಷದ ಯುವಕನ ಕಾಲಿಗೆ ಗುಂಡು ತಗುಲಿದೆ. ಅವನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದ್ದು, ಗುಂಡು ತಗುಲಿರುವ ವ್ಯಕ್ತಿಯು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಪೆÇಲೀಸರು ಅಧಿಕಾರಿಗಳು ಭೇಟಿ ನೀಡಿದ್ದು ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

Post a Comment

ನವೀನ ಹಳೆಯದು