ವಿಜಯಪುರ : ವಚನಗಳನ್ನು ಹೇಳಲು ಬಾರದವರು ಬಸವಣ್ಣನವರ ಬಗ್ಗೆ, ಬಸವಾದಿ ಶರಣರ ಬಗ್ಗೆ ಮಾತನಾಡುತ್ತಾರೆ, ಕೋಟಿ ಕೋಟಿ ವಚನಗಳು ಇರುವ ಬಗ್ಗೆ ನಾನೇ ನಿಮಗೆ ದಾಖಲೆ ಕೊಡುತ್ತೇನೆ, ಯಾರೋ ಬರೆದುಕೊಟ್ಟ ಸ್ಕಿçಪ್ಟ್ ಓದಲು ಹೋಗಬೇಡಿ ಎಂದು ಕೋಟಿ ಕೋಟಿ ವಚನಗಳ ಬಗ್ಗೆ ಲಾಜಿಕಲ್ ಪ್ರಶ್ನೆ ಎತ್ತಿದ್ದ ಡಾ.ಸುರೇಶ ಬಿರಾದಾರ ಅವರಿಗೆ ಬಸವ ತತ್ವ ಚಿಂತಕ ಡಾ.ರವಿಕುಮಾರ ಬಿರಾದಾರ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟಿ ಕೋಟಿ ವಚನಗಳು ಇವೆ, ಶರಣರ ಒಂದೊAದು ಪದವೂ ವಚನವೇ, ಆದರೆ ವಚನವೇ ಗೊತ್ತಿರದವರು ಶರಣರ ವಿಚಾರಧಾರೆ, ಚಿಂತನೆಗಳ ಬಗ್ಗೆ ಲಾಜಿಕಲ್ ಪ್ರಶ್ನೆ ಎತ್ತುತ್ತಿರುವುದು ದುರ್ದೈವ, ಬಸವಣ್ಣನವರನ್ನು ಯಾರೂ ಬಿಸಿನೆಸ್ ಮಾಡಿಕೊಂಡಿಲ್ಲ, ಅವರು ಪ್ರತಿನಿಧಿಸುವ ಪಕ್ಷದವರು ಶ್ರೀ ರಾಮನನ್ನು ಬಿಸಿನೆಸ್ ಮಾಡಿಕೊಂಡು ರಾಮನ ಆದರ್ಶಗಳನ್ನೇ ಬುಡಮೇಲು ಮಾಡಿಕೊಂಡಿರುವುದು ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಶರಣರ ಬಗ್ಗೆ, ಅವರ ವಚನ ಬಗ್ಗೆ ಅವರಿಗೆ ಅಧ್ಯಾಯನ ಇಲ್ಲ, ಕಲ್ಯಾಣ ಕ್ರಾಂತಿಯ ವೇಳೆ ಬಿಜ್ಜಳನ ಕೊಲೆಯಾಗುತ್ತದೆ, ನಂತರ ವೈದಿಕರು ತಮ್ಮ ಕೈಗೆ ಅಧಿಕಾರ ಪಡೆದುಕೊಳ್ಳುತ್ತಾರೆ, ಪರಿಣಾಮವಾಗಿ ಕೋಟ್ಯಂತರ ವಚನಗಳನ್ನು ಸುಡುತ್ತಾರೆ, ವಿಭೂತಿ ಧರಿಸಿದವರನ್ನು, ಲಿಂಗ ಧರಿಸಿದವರನ್ನು ಕಂಡ ಕಂಡಲ್ಲಿ ಕೊಲ್ಲುತ್ತಾರೆ, ಕಲ್ಯಾಣ ಕ್ರಾಂತಿಯಲ್ಲಿ ಇಷ್ಟೊಂದು ಶರಣರನ್ನು ಕೊಲ್ಲಲು ಹೇಗೆ ಸಾಧ್ಯ ಎಂಬ ತರ್ಕಹೀನ ವಿಷಯವನ್ನು ಎತ್ತಿರುವುದು ಡಾ.ಸುರೇಶ ಬಿರಾದಾರ ಅವರಿಗೆ ಶೋಭೆ ತರುವಂತಹದ್ದಲ್ಲ ಎಂದರು.
ಕೋಟಿ ಕೋಟಿ ವಚನಗಳ ಬಗ್ಗೆ ದಾಖಲೆಗಳಿವೆ, ಯಾರೊ ಬರೆದುಕೊಟ್ಟಿರುವ ಸ್ಕ್ರಿಫ್ಟ್ ಓದುವುದು ಬಿಟ್ಟು ಅಧ್ಯಯನ ಮಾಡಿ ಎಂದರು.
ಕನೇರಿ ಶ್ರೀಗಳು ಮುಸ್ಲಿಂರ ಬಗ್ಗೆ ಅವಹೇಳನಕಾರಿಯಾಗಿ, ಬಸವಾದಿ ಶರಣರನ್ನು ತಾಲಿಬಾನಿ ಎಂದು ಕರೆಯುವುದನ್ನು ಮೊದಲು ಬಿಡಬೇಕು, ಎಷ್ಟೋ ಜನ ಮುಸ್ಲಿಂರು ಸ್ವಯಂ ಪ್ರೇರಿತವಾಗಿ ಲಿಂಗಾಯತ ಧೀಕ್ಷೆ ಸ್ವೀಕರಿಸಿ ಮಠಾಧೀಶರಾಗಿದ್ದಾರೆ, ಇದನ್ನು ಲವ್ ಜಿಹಾದ್ ಎನ್ನಬಹುದೇ ಎಂದು ಪ್ರಶ್ನಿಸಿದರು.
ಬಿಜೆಪಿಗರು ಬಸವ ಸಂಸ್ಕೃತಿಯನ್ನು ವಿನಾಶ ಮಾಡಲು ಬಸವೇಶ್ವರರು ಪ್ರತ್ಯೇಕ ಧರ್ಮ ಸ್ಥಾಪಿಸಲಿಲ್ಲ, ಕಲ್ಯಾಣ ಕ್ರಾಂತಿ ನಡೆಯಲಿಲ್ಲ ಕೇವಲ ಧಾರ್ಮಿಕ ಚಳವಳಿ ಮಾತ್ರ ನಡೆಸಿದರು, ಬಸವಣ್ಣನವರು ಹಿಂದೂ ಧರ್ಮದ ಸುಧಾರಕ, ಬಸವಾದಿ ಶರಣರ ಹಿಂದೂ ಸಮಾವೇಶ ಹಾಗೂ ವಚನ ದರ್ಶನ ಎಂಬ ಪುಸ್ತಕದ ಮೂಲಕ ತಪ್ಪು ಸಂದೇಸದ ಟೂಲ್ ಕಿಟ್ ಆಗಿ ಬಳಕೆ ಮಾಡುತ್ತಿರುವುದು ದುರ್ದೈವ ಎಂದರು.
ಬಿಜೆಪಿಯವರ ಕಪ್ಪು ಹಣ ಕನೇರಿ ಶ್ರೀಗಳ ಬಳಿ ಇದೆ...
ದಲಿತ ಮುಖಂಡ ಅಡಿವೆಪ್ಪ ಸಾಲಗಲ್ಲ ಮಾತನಾಡಿ, ಕನೇರಿ ಸ್ವಾಮಿಯ ಪೂರ್ವಾಶ್ರಮದ ಹೆಸರು ಬಾಪುಗೌಡ ಮೇಟಿ, ಮೊದಲು ಬಸವಧರ್ಮ ಪ್ರಚಾರಕರಾಗಿ ನಂತರ ಅವರ ತಮ್ಮನನ್ನು ಜಿ.ಪಂ ಸದಸ್ಯನಾಗಿ ಮಾಡಿ ಅಲ್ಲಿಂದ ಬಸವಣ್ಣನ ಹೆಸರಿನಲ್ಲಿ ಪ್ರಚಾರ ಮಾಡಿದರು, ನಂತರ ಬಸವ ಸಂಸ್ಕೃತಿಯ ಚಿಂತನೆಯ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ, ಇವರ ವ್ಯಾಪಾರ-ವಹಿವಾಟು ಯಾರ ಜೊತೆ ಇದೆ, ಬಿ.ಎಲ್. ಸಂತೋಷ್ ಅವರ ಜೊತೆ ಏನು ಸಂಬAಧವಿದೆ ಎಲ್ಲವನ್ನೂ ಬೆಳಕಿಗೆ ತರಬೇಕಾಗುತ್ತದೆ, ಬಸರಕೋಡದಲ್ಲಿ ಇವರ ಆಸ್ತಿ ಎಷ್ಟಿತ್ತು, ಈಗ ಎಷ್ಟಿದೆ, ೧೦೦ ಎಕರೆ ದ್ರಾಕ್ಷಿ ತೋಟ ಹೇಗೆ ಮಾಡಿದರು? ಬಿಜೆಪಿಯಲ್ಲಿ ಬಿ.ಎಲ್.ಸಂತೋಷ ಅವರ ಅನುಯಾಯಿ ಆಗಿ ಅವರ ಜೊತೆ ಸಂಪರ್ಕ ಇಟ್ಟುಕೊಂಡು ಅವರ ಜೊತೆ ವಹಿವಾಟು ಮಾಡುತ್ತಾ ಕಪ್ಪು ಹಣವನ್ನು ಶ್ರೀಗಳು ಇಟ್ಟುಕೊಂಡಿದ್ದಾರೆ, ಮುಂದಿನ ಚುನಾವಣೆಯಲ್ಲಿ ಯಾರಿಗೆ ಟಿಕೇಟ್ ನೀಡಬೇಕೆಂದು ಈಗಲೇ ಬುಕ್ ಮಾಡಿಕೊಂಡು ಇವರು ಇಟ್ಟುಕೊಂಡಿದ್ದಾರೆ ಎಂದರು.
ಚಿದಾನAದ ಚಲವಾದಿ ಅವರು ನಮಗೆ ಕನೇರಿ ಬಂದು ನೋಡಿ ಎಂದು ಕರೆ ನೀಡಿದರು. ಅವರಿಗೆ ಧನ್ಯವಾದ ತಿಳಿಸುತ್ತೇವೆ. ಅವರು ನಮಗೆ ಕನೇರಿಗೆ ಅಹ್ವಾನಿಸಿದ್ದರಿಂದಲೇ ನಮಗೆ ಇಷ್ಟೆಲ್ಲ ಮಾಹಿತಿ ಸಿಕ್ಕಿತು. ನಿಮಗೇನು ಮಾಡುವುದಿದೆ ಹಿಂದು ಧರ್ಮದ ಹೆಸರಿನ ಮೇಲೆ ನಿಮಗೇನು ಮಾಡುವುದಿದೆ ಮಾಡಿ ನೀವು, ಆದರೆ ಬಸವಾದಿ ಶರಣರ ಹೆಸರಿನ ಮೇಲೆ ಮಾಡಬೇಡಿ, ಎಲ್ಲರಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕಿದೆ ಮಾಡಿ ಆದರೆ ಕಾನೂನಿನ ಚೌಕಟ್ಟಿನಲ್ಲಿದ್ದು ಮಾಡಿ, ಕಾನೂನು ಚೌಕಟ್ಟು ಬಿಟ್ಟು ಮಾಡಿದರೆ ಅಥವಾ ಸಂವಿಧಾನಕ್ಕೆ ಅಪಚಾರ ಆಗುವಂತಿದ್ದರೆ ಅದು ದೇಶದ್ರೋಹಿನೇ ಸರಿ ಎಂದದರು.
ಕಾಡಸಿದ್ದೇಶ್ವರರ ವಚನಗಳ ಆಶಯಕ್ಕೆ ವಿರುದ್ಧವಾಗಿ ಕನೇರಿ ಶ್ರೀಗಳು ನಡೆದುಕೊಳ್ಳುತ್ತಿದ್ದಾರೆ, ಅಲ್ಲಿ ಬಸವಣ್ಣನವರ ಭಾವಚಿತ್ರ ಸಹ ಇಲ್ಲ, ಬಸವಾದಿಗಳು ಯಾರಾದರು ಮಠಕ್ಕೆ ಬಂದರೆ ಅವರನ್ನು ನಡೆದುಕೊಳ್ಳುವ ರೀತಿಯೆ ಬೇರೆ ಇದೆ ಅಲ್ಲಿ ಇಂತಹವರನ್ನು ಸ್ವಾಮಿ ಎಂದು ಹೇಗೆ ಕರೆಯುವುದು ಎಂದು ಪ್ರಶ್ನಿಸಿದರು.
ಪ್ರಭುಗೌಡ ಪಾಟೀಲ, ಮಹಾದೇವಿ ಗೋಕಾಕ, ಚನ್ನು ಕಟ್ಟಿಮನಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್ ಪೋಸ್ಟ್ ಮಾಡಿ