Top News

ಯಾರನ್ನೋ ಓಲೈಕೆಗೆ ಕನೇರಿ ಶ್ರೀಗಳಿಗೆ ಹಗುರವಾಗಿ ಪದ ಬಳಸಿರುವುದು ಸರಿಯಲ್ಲ: ಡಾ.ಸುರೇಶ ಬಿರಾದಾರ

ಕೋಟ್ಯಂತರ ಶರಣರ ವಚನಗಳನ್ನು ಸುಟ್ಟರು ಎಂದು ಹೇಳುವುದು ಲಾಜಿಕ್ ಅಲ್ಲವೇ ಅಲ್ಲ, ಅಷ್ಟೊಂದು ವಚನಗಳನ್ನು ಇರಬೇಕು  ಎಂದರೆ ಒಬ್ಬೊಬ್ಬ ಶರಣರು ೨೩  ಸಾವಿರ ವಚನಗಳನ್ನು ಬರೆಯಲು ಸಾಧ್ಯವೇ? ಎಂದು  ಬಿಜೆಪಿ ಮುಖಂಡ ಡಾ.ಸುರೇಶ ಬಿರಾದಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನನ್ನು ಕೆಲವರು ಬಿಸಿನೆಸ್ ಮಾಡಿಕೊಂಡಿದ್ದಾರೆ, ನಮ್ಮ ವಿಚಾರಧಾರೆಯನ್ನು ನಾವು ಪ್ರತಿಪಾದಿಸುತ್ತಿದ್ದೇವೆ, ಹಿಂದೂಗಳನ್ನು ಬೈದು ಬಿಟ್ಟರೆ ಅಲ್ಪಸಂಖ್ಯಾತರು ಖುಷಿಯಾಗುತ್ತಾರೆ ಎನ್ನುವ ಕಾರಣಕ್ಕೆ ರೀತಿ ಕೆಲವರು ಹೇಳಿಕೆ ನೀಡುತ್ತಿದ್ದಾರೆ, ನಿಮ್ಮ ವಿಚಾರಧಾರೆ ನಿಮಗೆ, ನಮ್ಮ ವಿಚಾರಧಾರೆ ನಮಗೆ, ಅದನ್ನು ಪಾಲಿಸುವ ವಿವೇಚನೆ ಜನರಿಗೆ ಬಿಡೋಣ ಎಂದರು.

೧೨ ನೇ ಶತಮಾನದಲ್ಲಿ ಬಸವ ಕಲ್ಯಾಣದಲ್ಲಿ ಜನಸಂಖ್ಯೆ ಎಷ್ಟಿತ್ತು, ಕಗ್ಗೊಲೆ ಮಾಡಿದರು ಎಂಬ ಆರೋಪವನ್ನು ಹಿಂದೂ ಧರ್ಮಿಯರ ಮೇಲೆ ಹಾಕುತ್ತಾರೆ, ಅದರೆ ಅಲ್ಲಿದ್ದ ಬಿಜ್ಜಳ ರಾಜ ಜೈನರು, ಅವರು ಎಂದೂ ಹಿಂಸೆಯನ್ನು ಪ್ರೋತ್ಸಾಹಿಸುವವರೇ ಅಲ್ಲ, ರೀತಿ ಕಗ್ಗೊಲೆ ನಡೆದರೆ ಅವರು ಸುಮ್ಮನೇಕೆ ಕುಳಿತರು ಎಂದರು.

ಪ್ರಚಾರಕ್ಕಾಗಿ ಹಾಗೂ ಯಾರನ್ನೋ ಓಲೈಕೆಗೆ ಕನೇರಿ ಶ್ರೀಗಳಿಗೆ ಹಗುರವಾಗಿ ಪದ ಬಳಸಿರುವುದು ಸರಿಯಲ್ಲ.ಲಿಂಗಾಯತರು ಹಿಂದೂಗಳು, ಹಿಂದೂ ಮುಸ್ಲಿಂ, ಹಿಂದೂ ಕ್ರಿಶ್ಚಿಯನ್ ಎಂದೇ ಇದ್ದವು, ರಾಜಕೀಯವಾಗಿ ಅದನ್ನು ಒಡೆಯಲಾಯಿತು,ಬಸವಾದಿ ಹಿಂದೂ ಸಮಾವೇಶ ಕಲಬೆರಕೆ ಸಮಾವೇಶ ಎಂದಿರುವುದು ಯಾವ ನ್ಯಾಯ ಎಂದರು.

ಕಮ್ಯೂನಿಸಂಸಿದ್ದಾಂತವನ್ನು ಹೇರಲು ಪ್ರತ್ಯೇಕತೆ ಧರ್ಮದ ವಿಷ ಬೀಜ ಬಿತ್ತುತ್ತಿದ್ದಾರೆ ಎಂದರು.ಬಸವಾದಿ ಶರಣರ ಸಮಾವೇಶ ನಡೆದೆ ನಡೆಯುತ್ತದೆ, ರೀತಿಯ ಸಮಾವೇಶಗಳನ್ನು ದಮನ ಮಾಡುವ ಮೂಲಕ ಭಾರತೀಯ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಲು ಹೊರಟಿದೆ ಎಂದರು.


Post a Comment

ನವೀನ ಹಳೆಯದು