Top News

ವಿಜಯಪುರ ಪೊಲೀಸ್ ರಿಂದ 1.30ಕೋಟಿ ರೂ. ಮೌಲ್ಯದ ಅಕ್ರಮ ಮದ್ಯ ವಶ


ಗೋವಾದಿಂದ ಮಹಾರಾಷ್ಟ್ರಕ್ಕೆಸಾಗಿಸುತ್ತಿದ್ದ ಅಕ್ರಮ ಮದ್ಯ ವಶ 

ವಿಜಯಪುರ : ಲಾರಿಯಲ್ಲಿ ಮೇಲ್ಭಾಗದಲ್ಲಿ ಎರೆಹುಳು ಗೊಬ್ಬರ ಚೀಲ ಇರಿಸಿ ಚಾಣಾಕ್ಷತನದಿಂದ ಒಳಗೆ ಸಾರಾಯಿ ತುಂಬಿ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಗಳನ್ನು ಬಂಧಿಸಿರುವ ಪೊಲೀಸರು 1.30 ಕೋಟಿ ರೂ. ಮೌಲ್ಯದ ಅಕ್ರಮ ಮಧ್ಯವನ್ನು ಜಪ್ತು ಮಾಡಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಶ್ರೀನಿವಾಸ ಮೀಸಿ, ಹುಸೇನಸಾಬ್ ಮುಲ್ಲಾ, ಸಿದ್ಧರಾಮ ಡಾಲೆ, ಬಸವರಾಜ ಭಜಂತ್ರಿ ಎಂದು ಗುರುತಿಸಲಾಗಿದೆ

ಬಂಧಿತ ಆರೋಪಿಗಳಿಂದ 1,36,82,800  ರೂ. ಮೌಲ್ಯದ ಮಧ್ಯ ಜಪ್ತು ಮಾಡಿಕೊಂಡಿದ್ದಾರೆ.

ಯಾರಿಗೂ ಗೊತ್ತಾಗದ ರೀತಿಯಲ್ಲಿ ಮೇಲ್ನೋಟಕ್ಕೆ ನೋಡಿದಾಗ ಎರೆ ಹುಳು ಗೊಬ್ಬರ ಸಾಗಾಟ ಮಾಡುವ ರೀತಿಯಲ್ಲಿ ಚೀಲಗಳನ್ನು ಲಾರಿಯಲ್ಲಿ ಹೇರಿಕೊಂಡು ಹೊರಟಿದ್ದಾರೆ. ವೇಳೆ ಪೆಟ್ರೋಲಿಂಗ್ ಕರ್ತವ್ಯ ನಿರತ ಪೊಲೀದ್ ಅಧಿಕಾರಿಗಳು ಕೊಲ್ಹಾರ ನಾಕಾ ಬಳಿ ವಾಹನವನ್ನು ತಪಾಸಣೆ ನಡೆಸಿದ್ದಾರೆ, ತಾಡಪತ್ರೆಯಿಂದ ಮುಚ್ಚಿದ ಲಾರಿಯ ಹಿಂಭಾಗ ಹಾಗೂ ಮೇಲ್ಭಾಗದಲ್ಲಿ ಎರೆ ಹುಳು ಗೊಬ್ಬರ ಅದರ ಅಡಿಯಲ್ಲಿ ಮಧ್ಯ ಇರಿಸಲಾಗಿತ್ತು. ಮಧ್ಯಕ್ಕೆ ಯಾವ ಸೂಕ್ತ ದಾಖಲೆ ಇಲ್ಲದೇ ಅಕ್ರಮವಾಗಿ ಸಾಗಾಟ ಎಂಬುದು ಪತ್ತೆಯಾದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗೋವಾ ರಾಜಧಾನಿ ಪಣಜಿಯಿಂದ ಮಹಾರಾಷ್ಟ್ರಕ್ಕೆ ಅಕ್ರಮ ರೀತಿಯಲ್ಲಿ ಮಧ್ಯ ಸಾಗಾಟ ಮಾಡುತ್ತಿದ್ದರು ಎಂದು ಜಿಲ್ಲಾ ಪೊಲೀಸ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.

 

Post a Comment

ನವೀನ ಹಳೆಯದು