ಕಾರು-ಆಟೋ ಡಿಕ್ಕಿ: ಮಗು ಸೆರಿ ನಾಲ್ವರಿಗೆ ಗಾಯ

ಬೆಂಗಳೂರು ಆವಲಹಳ್ಳಿಯಲ್ಲಿ ಕಾರು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ ಮೇಡಹಳ್ಳಿ ಮೇಲ್ಸೇತುವೆ ಬಳಿ ನಡೆದಿದೆ. ಹೊಸಕೋಟೆಯಿಂದ ಕೆಆರ್ ಪುರಂ ಕಡೆಗೆ ಬರುತ್ತಿದ್ದ ಇಂಡಿಕಾ ಕಾರು ನಿಯಂತ್ರಣ ತಪ್ಪಿ ಆಟೋಗೆ ಡಿಕ್ಕಿ ಹೊಡೆದಿದೆ. ಆಟೋ ಪಲ್ಟಿಯಾಗಿ ಅದರಲ್ಲಿದ್ದ ಮಗುಗೆ ಲಘು ಗಾಯಗಳಾಗಿವೆ. ಇನ್ನು ಕಾರಿನಲ್ಲಿದ್ದ ಮೂವರಿಗೆ ಸಣ್ಣ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣ ಆವಲಹಳ್ಳಿ ಠಾಣೆಯಲ್ಲಿ ದಾಖಲಾಗಿದೆ.

Post a Comment

ನವೀನ ಹಳೆಯದು