ಮಹತ್ವದ ನಿರ್ಧಾರ ಸಾಧ್ಯತೆ : ಅಕ್ಕಿ ಜೊತೆ ರೇಷನ್ ಕಿಟ್ ವಿತರಣೆ


ಜುಲೈ 2ರಂದು ನಂದಿ ಬೆಟ್ಟದಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಪಡಿತರ ಅಕ್ಕಿಗೆ ಜೊತೆಗೆ ಆಹಾರ ಕಿಟ್ ವಿತರಣೆಗೆ ಆಹಾರ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಹೆಚ್ಚುವರಿ 5 ಕೆಜಿ ಅಕ್ಕಿ ಬದಲಾಗಿ ಸಕ್ಕರೆ, ಉಪ್ಪು, ತೊಗರಿ ಬೇಳೆ, ಟೀ, ಕಾಫಿ ಪೌಡರ್, ಅಡುಗೆ ಎಣ್ಣೆ ಮತ್ತು ಗೋಧಿ ಒಳಗೊಂಡ ಕಿಟ್ ವಿತರಿಸಲು ಪ್ರಸ್ತಾವ ಇದೆ. ಇನ್ನು ಪ್ರಸ್ತಾವನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತರೆ ಮಾತ್ರ ಕಿಟ್ ವಿತರಣೆಗೆ ಚಾಲನೆ ಸಿಗಲಿದೆ.

Post a Comment

ನವೀನ ಹಳೆಯದು