ಗಾರೆ ಕೆಲಸಗಾರನ ಬರ್ಬರ ಹತ್ಯೆ


ಮದ್ಯ ತರಲು ತೆರಳಿದ್ದ ಗಾರೆ ಕೆಲಸಗಾರನೊಬ್ಬನನ್ನು ಅಪರಿಚಿತರು ಕೊಲೆ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ. ಮೃತ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ಶಿವು (35) ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ಬಾರ್ಗೆ ಹೋಗುವಾಗ ರಸ್ತೆಯಲ್ಲಿ ಅಪರಿಚಿತರೊಂದಿಗೆ ಜಗಳ ಉಂಟಾಗಿ, ಇಬ್ಬರು ಯುವಕರು ದೊಣ್ಣೆ ಹಾಗೂ ಕಲ್ಲುಗಳಿಂದ ಶಿವುವನ್ನು ಹೊಡೆದಿದ್ದಾರೆ. ಗಂಭೀರ ಗಾಯಗೊಂಡಿದ್ದ ಶಿವು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಪ್ರಕರಣ ದಾಖಲಾಗಿದೆ.

Post a Comment

ನವೀನ ಹಳೆಯದು