ವಿಜಯಪುರ : ಶಾಲಾ ಮಕ್ಕಳ ಮಧ್ಯ ಮಾರಾಮಾರಿ ಹೊಡೆದಾಡಿಕೊಂಡು ಬಾಲಕನೋರ್ವ ಮೃತಪಟ್ಟಿರುವ ಘಟನೆ ಯೋಗಾಪುರ ಕಾಲೋನಿಯಲ್ಲಿ ನಡೆದಿದೆ.
ನಗರದ ವಾರ್ಡ್ ನಂಬರ್ 16 ರಲ್ಲಿ ಬರುವ ಯೋಗಾಪುರ ಕಾಲೋನಿಯಲ್ಲಿರುವ ಶ್ರೀ ಸತ್ಯ ಸಾಯಿಬಾಬಾ ಆಂಗ್ಲ ಮತ್ತು ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಅನ್ಸ್ ತಂದೆ ಸುನಿಲ್ ಮೃತಾಪಟ್ಟಿದ್ದಾನೆ.
ಅನ್ಸ್ ತಂದೆ ಬಿಹಾರ ಮೂಲದ ಸುನಿಲ್ ಪಾನಿಪುರಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಸಾಯಿಬಾಬಾ ಶಾಲೆಯಲ್ಲಿಯೇ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ....
ಮೃತಪಟ್ಟಿರುವ ವಿದ್ಯಾರ್ಥಿ ಅನ್ಸ್ ಶವವನ್ನು ಶಾಲೆ ಗೆಟ್ ಮುಂದೆ ಇಟ್ಟು ಪ್ರತಿಭಟನೆ ನಡೆಸುತ್ತಿರುವ ಕುಟುಂಬ ಸದಸ್ಯರು ಶಾಲಾ ಗೆಟ್ ಬಳಿ ಭಾರಿ ಪ್ರಮಾಣದಲ್ಲಿ ಜನ ಜಮಾವಣೆಯಾಗಿದ್ದು ಪೊಲೀಸ್ ಇಲಾಖೆ, ಫಾರೆನ್ಸಿಕ್ ಸೈನ್ಸ್ ಟೀಮ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಾಮೆಂಟ್ ಪೋಸ್ಟ್ ಮಾಡಿ