ಬಣಜಿಗ ಸಮಾಜ: ನೂತನ ಪದಾಧಿಕಾರಿಗಳ ಆಯ್ಕೆ


ಮುದ್ದೇಬಿಹಾಳ: ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘಕ್ಕೆ ಅಧ್ಯಕ್ಷರನ್ನಾಗಿ ಗಣ್ಯ ವ್ಯಾಪಾರಸ್ಥ ಅಶೋಕ ಚಟ್ಟೇರ ಅವರನ್ನು ಆಯ್ಕೆ ಮಾಡಲಾಯಿತು.

ಪಟ್ಟಣದ ಕಿಲ್ಲಾದಲ್ಲಿರುವ ಹೊಸಮಠದಲ್ಲಿ ಭಾನುವಾರ ಸಂಜೆ ನಡೆದ ಬಣಜಿಗ ಸಮಾಜದ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಅವಿರೋಧವಾಗಿ ಚಟ್ಟೇರ ಅವರನ್ನು ಆಯ್ಕೆ ಮಾಡಲಾಯಿತು.

ಈ ವೇಳೆ ಸಮಘದ ನಿಕಟಪೂರ್ವ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ಮಾತನಾಡಿ, ಕಳೆದ ಎರಡು ವರ್ಷಗಳ ಹಿಂದೆಯೇ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಬೇಕಿತ್ತು. ರಾಜ್ಯ ಘಟಕದ ಪದಾಧಿಕಾರಿಗಳ ಆಯ್ಕೆ ಸಹ ವಿಳಂಬವಾಗಿದ್ದರಿಂದ ತಡವಾಗಿದೆ ಎಂದರು.

ಸಮಾಜದ ಹಿರಿಯರಾದ ಬಸವರಾಜ ನಾವದಗಿ, ಬಸವರಾಜ ನಾಲತವಾಡ, ದಾನಪ್ಪ ನಾಗಠಾಣ, ಸಂಗಣ್ಣ ಕಂಚ್ಯಾಣಿ, ಎಂ.ವಿ.ಮಾಟಲದಿನ್ನಿ, ವಿಶ್ವನಾಥ್ ಕಿಣಗಿ,  ಮುರಿಗೆಪ್ಪ ಮೋಟಗಿ, ಮುತ್ತು ಕಡಿ, ನಿಂಗಣ್ಣ ಚಟ್ಟೇರ, ರಾಜು ಜೋಳದ,  ಮಹಾಬಲೇಶ್ವರ ಗಡೇದ, ಲೋಹಿತ ನಾಲತವಾಡ, ಸಂಗಮೇಶ ನಾವದಗಿ, ಸೋಮಶೇಖರ ಅಣೆಪ್ಪನವರ, ಪ್ರವೀಣ ನಾಗಠಾಣ, ಡಿ.ಎಸ್.ಚಳಗೇರಿ, ಚಂದ್ರಶೇಖರ ಕಡಿ, ರಾಜು ದಡ್ಡಿ, ಶಿವಾನಂದ ಚಿಲ್ಲಾಳಶೆಟ್ಟಿ, ಉಮೇಶ ತಾರನಾಳ, ಮಹಾಂತೇಶ ಮೋಟಗಿ ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು. ಆನಂದ ಕಂಠಿ ಪ್ರಾಸ್ತಾವಿಕ ಮಾತನಾಡಿದರು. ರುದ್ರೇಶ ಕಿತ್ತೂರ ನಿರೂಪಿಸಿದರು. ಇದೇ ವೇಳೆ ಯುವ ಘಟಕ ಮತ್ತು ಮಹಿಳಾ ಘಟಕದ ಪದಾಧಿಕಾರಿಗಳನ್ನೂ ಸಹ ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳು: ಗೌರವಾಧ್ಯಕ್ಷರು: ಎಂ.ಎಸ್.ನಾವದಗಿ ವಕೀಲರು, ಅಧ್ಯಕ್ಷರು: ಅಶೋಕ ಚಟ್ಟೇರ, ಉಪಾಧ್ಯಕ್ಷರು: ಬಿ.ಎಸ್.ಚಿನಿವಾರ ನಾಲತವಾಡ, ಪ್ರಧಾನ ಕಾರ್ಯದರ್ಶಿ: ರಾಜು ಬಳ್ಳೊಳ್ಳಿ, ಖಜಾಂಚಿ: ಸಂತೋಷ ನಾಯನೇಗಲಿ,

ಯುವ ಘಟಕ: ಅಧ್ಯಕ್ಷರು: ಶಂಕರ ಕಡಿ, ಉಪಾಧ್ಯಕ್ಷ: ಬಸವರಾಜ ದಡ್ಡಿ ವಕೀಲರು, ಪ್ರಧಾನ ಕಾರ್ಯದರ್ಶಿ: ಸುಚೀತ ಚಳಗೇರಿ,

ಮಹಿಳಾ ಘಟಕ:ಅಧ್ಯಕ್ಷರು: ಶೋಭಾ ಉಮೇಶ ನಾಗಠಾಣ, ಉಪಾಧ್ಯಕ್ಷರು: ಕವಿತಾ ದಡ್ಡಿ, ಕಾರ್ಯದರ್ಶಿ: ರೇಖಾ ಗಡೇದ,

ಬಣಜಿಗ ಸಮಾಜದ ಹಿರಿಯರು ಸೇರಿದಂತೆ ಸರ್ವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ನನ್ನನ್ನು ಆಯ್ಕೆ ಮಾಡಿದ ಎಲ್ಲ ಹಿರಿಯರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಮುದ್ದೇಬಿಹಾಳ ಬಣಜಿಗ ಸಮಾಜದ ಅಧ್ಯಕ್ಷರಾದ ಅಶೋಕ ಚಟ್ಟೇರ ತಿಳಿಸಿದ್ದಾರೆ.

Post a Comment

ನವೀನ ಹಳೆಯದು