ಜೂ.20ರಂದು ವಿಜಯಪುರ ನಗರ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯ


ಕೆಪಿಟಿಸಿಎಲ್ ವತಿಯಿಂದ 110ಕೆವ್ಹಿ ಬೇಗಳ ಮೊದಲನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ 110/11 ಕೆವ್ಹಿ ವಿವಿ ಕೇಂದ್ರ, ಕೆಐಎಡಿಬಿ, ಭೂತನಾಳ, ಜುಮನಾಳ, ವಿಜಯಪುರ ನಗರ, ಮತ್ತು 33/11 ಕೆವ್ಹಿ ಹೊನ್ನುಟಗಿ, ನಾಗಠಾಣ, ತಿಡಗುಂದಿ ಹಾಗೂ 220/110 ಕೆವ್ಹಿ ಸ್ವೀಕರಣಾ ಕೇಂದ್ರ ವಿಜಯಪುರದಿಂದ ಹೊರಗುವ ಎಲ್ಲ 11 ಕೆವ್ಹಿ ವಿದ್ಯುತ್ ಮಾರ್ಗಗಳಿಗೆ ಜೂ.20ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.  

Post a Comment

ನವೀನ ಹಳೆಯದು