Top News

ಡಿ.ಕೆ.ಶಿವಕುಮಾರ ಸಂಪುಟದಲ್ಲಿ 20 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು : ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯ ಭಾಗವಾಗಿ, ಸೋಮವಾರ  ಕರ್ನಾಟಕ  ಸರ್ಕಾರದ ಸಚಿವ ಸಂಪುಟದಲ್ಲಿ 20  ಶಾಸಕರು ನೂತನವಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

            ಸೋಮವಾರ ಸಂಜೆ ಲೋಕಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ  ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಮತಕ್ಷೇತ್ರಗಳಿಂದ ಆಯ್ಕೆಯಾದ 20 ಜನ ಶಾಸಕರು  ನೂತನವಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಅವರು ರ‍್ನಾಟಕ ವಿಧಾನಸಭೆಯ ನೂತನ ಸ್ಪೀಕರ್ ಆಗಲಿದ್ದು, ಸಲೀಂ ಅಹ್ಮದ್ ಅವರನ್ನು ವಿಧಾನ ಪರಿಷತ್ತಿನ ಸಭಾಪತಿಯಾಗಿ ಆಯ್ಕೆ ಮಾಡಲಾಗಿದೆ.

ವಿವಿಧ ಜಾತಿಗಳು, ಪ್ರದೇಶಗಳು ಮತ್ತು ಸಮುದಾಯಗಳಿಗೆ ಸಮತೋಲಿತ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ಮೂಲಕ  ಸರಕಾರವನ್ನುಬಲಪಡಿಸುವುದು ಈ ರಾಜಕೀಯ ಪ್ರಕ್ರಿಯೆಯ ಉದ್ದೇಶವಾಗಿದ್ದು,ಹೆಸರುಗಳನ್ನು ಅಂತಿಮಗೊಳಿಸುವ ಮುನ್ನ ಪಕ್ಷದ ನಾಯಕರು ಸಾಮಾಜಿಕ ಸಮೀಕರಣಗಳು, ಚುನಾವಣಾ ತಂತ್ರ ಮತ್ತು ಪ್ರಾದೇಶಿಕ ಆಕಾಂಕ್ಷೆಗಳನ್ನು ಕೂಡ ಪರಿಗಣಿಸಲಾಗಿದೆ.

 ನೂತನ ಸಚಿವರು :  ಮಳವಳ್ಳಿ ಕ್ಷೇತ್ರದ  ಶಾಸಕ ಪಿ.ಎಂ.ನರೇಂದ್ರಸ್ವಾಮಿ,  ಕನಕಗಿರಿ ಶಾಸಕ, ಶಿವರಾಜ ತಂಗಡಗಿ, ಹಾವೇರಿ ಶಾಸಕ  ರುದ್ರಪ್ಪ ಲಮಾಣಿ, ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್.ಬಸವಂತಪ್ಪ,  ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ, ಚಳ್ಳಕೇರಿ ಶಾಸಕ  ಟಿ.ರಘುಮೂರ್ತಿ, ಚಾಮರಾಜಪೇಟೆ ಶಾಸಕ ಬಿ.ಝಢ್, ಜಮೀರ ಅಹ್ಮದ ಖಾನ್, ಶಿವಾಜಿ ನಗರ ಶಾಸಕ ರಿಜ್ವಾನ್ ಅರ್ಷದ್, ಕಲಘಟಗಿ ಶಾಸಕ ಸಂತೋಷ ಲಾಡ್,  ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ, ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ,  ಜೇವರ್ಗಿ ಶಾಸಕ ಅಜಯಸಿಂಗ್ ,  ನಾಗಮಂಗಲ ಶಾಸಕ ಎನ್.ಚೆಲುವರಾಯಸ್ವಾಮಿ,  ಅರಸಿಕೆರೆ ಶಾಸಕ  ಕೆ.ಎಂ.ಶಿವಲಿಂಗೆಗೌಡ, ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ದಾವಣಗೆರೆ ಉತ್ತರ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ, ಹುನಗುಂದ ಶಾಸಕ ವಿಜಯನಾಂದ ಕಾಶಪ್ಪನವರ ಹಾಗೂ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಈ ಸಂಪುಟ ವಿಸ್ತರಣೆಯು ವಾಸ್ತವವಾಗಿ ಮೊದಲೇ ನಡೆಯಬೇಕಿತ್ತು; ಆದರೆ ರ‍್ನಾಟಕದ ವಿವಿಧ ಪ್ರದೇಶಗಳು ಹಾಗೂ ಸಮುದಾಯಗಳಿಗೆ ನ್ಯಾಯಯುತ ಪ್ರಾತಿನಿಧ್ಯ ಕಲ್ಪಿಸುವ ಜೊತೆಗೆ, ಅನುಭವಿ ನಾಯಕರು ಮತ್ತು ಮೊದಲ ಬಾರಿಗೆ ಸಚಿವರಾಗುತ್ತಿರುವವರ ನಡುವೆ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕತ್ವವು ಪ್ರಯತ್ನ ನಡೆಸಿದ್ದರಿಂದ ಇದಕ್ಕೆ ವಿಳಂಬವಾಯಿತು.

Post a Comment

ನವೀನ ಹಳೆಯದು