Top News

ಪ್ರಮಾಣ ಮಾಡಲು ಶಾಸಕ ಯತ್ನಾಳಗೆ ಅಬ್ದುಲಹಮೀದ ಮುಶ್ರೀಫ್ ಸವಾಲು

ವಿಜಯಪುರ: ನಾಗಠಾಣ ಸೇರಿಬೇರೆ ಮತಕ್ಷೇತ್ರದ ಜನರನ್ನು ನಗರ ಮತಕ್ಷೇತ್ರಕ್ಕೆ ಸೇರಿಸುತ್ತಿದ್ದೀರಿ ಯಾಕೆ?, ನಗರಮತಕ್ಷೇತ್ರದ ಹಿಂದೂಗಳ ಮೇಲೆ ನಮಗೆ ನಂಬಿಕೆ ಇಲ್ಲವೇ?, ನೀವು ಗೆದ್ದಿರುವುದು ಬೋಗಸ್ ಮತಗಳಿಂದ. ಒಂದು ವೇಳೆ, ಬೋಗಸ್ ಮತಗಳಿಂದ ಗೆದ್ದಿಲ್ಲ ಎನ್ನುವುದಾದರೆ ಎಂದು ನೀವು ನಿಮ್ಮ ಮಕ್ಕಳ ಪ್ರಮಾಣಮಾಡಿ ನೋಡೋಣ ಎಂದು ಮುಶ್ರೀಫ್ ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ಯಾವ ಅಕ್ರಮವನ್ನೂ ಮಾಡಿಲ್ಲ,‌ ಬೇಕಾದರೆ ನಾನೂ ನನ್ನ ಮಕ್ಕಳ ಮೇಲೆ ಪ್ರಮಾಣ ಮಾಡಲು ಸಿದ್ಧ ಎಂದರು.

ಶಿಕಾರಖಾನೆ, ಗಚ್ಚಿನಕಟ್ಟಿ ಕಾಲೋನಿಯಲ್ಲಿ ಮತ ಪಡೆದಿದ್ದೀರಿ, ಆದರೂ,   ಕಾಲೋನಿಗಳಲ್ಲಿ ಅಭಿವೃದ್ಧಿ ಇಲ್ಲ. ಎಲ್ಲ ಕಡೆ ಅಭಿವೃದ್ಧಿ ಮಾಡಿ, ಹುಡ್ಕೋ ಕಾಲೋನಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ನಿಲ್ಲಿಸಿದ್ದು ಯಾಕೆ? ಎಂದು ಪ್ರಶ್ನಿಸಿದರು.

ವಿಜಯಪುರವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಎಂದು ಹೇಳಿಕೆನೀಡಿದ್ದಾರೆ. ಹಾಗಾದರೆ, ಹಿಂದೆ ಜಿಲ್ಲೆಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ್ದು ಯಾರು?, ಬಗ್ಗೆ ತನಿಖೆಗೆ ನೀವು ಯಾಕೆ ಒತ್ತಾಯಿಸಿ ನೋಡೋಣ ಎಂದು ಇನ್ನೊಂದು ಸವಾಲು ಹಾಕಿದರು.

ಮುಖಂಡರಾದ ಫಯಾಜ್ ಕಲಾದಗಿ, ಮಹಾದೇವ ರಾವಜೀ, ಅಪ್ಪು ಪೂಜಾರಿ, ಈರಪ್ಪ ಕುಂಬಾರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Post a Comment

ನವೀನ ಹಳೆಯದು