ಸಡಗರ ಸಂಭ್ರಮದ ಗಣರಾಜ್ಯೋತ್ಸವ ದಿನಾಚರಣೆ : ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲರಿಂದ ಧ್ವಜಾರೋಹಣ


 ವಿಜಯಪುರ : ಗಣರಾಜ್ಯೋತ್ಸವ ದಿನಾಚರಣೆಯನ್ನು ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ  ಆಚರಿಸಲಾಯಿತು.ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ  ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ,ನಂತರ ಧ್ವಜವಂದನೆ ಸ್ವೀಕರಿಸಿ,ತೆರೆದ ವಾಹನದಲ್ಲಿ ಪೆರೇಡ್  ತಂಡಗಳ ಪರಿವೀಕ್ಷಣೆ ನಡೆಸಿ,ಗಣರಾಜ್ಯೋತ್ಸವ ಸಂದೇಶ ನೀಡಿದರು.

ಪರೇಡ್ ತುಕಡಿಗಳಿಂದ ಆಕರ್ಷಕ ಪಥ ಸಂಚಲನ : ನಿಶಿತಾ ಗುಪ್ತಾ ಐಪಿಎಸ್ ಪ್ರೊಬೆಷನರಿ ಅಧಿಕಾರಿ ಪಥಸಂಚಲನದ ನೇತೃತ್ವದ ಪಥಸಂಚಲನದಲ್ಲಿ ಡಿ.ಎ.ಆರ್  ಧಾನೇಶ್ವರಿ ಕಲ್ಯಾಣಿ ಅವರ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ, ಐಆರ್ ಬಿ ಘಟಕದ ಪ್ರಸಾದ ಜುನಮಾಲಾ ಅವರ ಮುಂದಾಳತ್ವದಲ್ಲಿ ಐಆರ್ ಬಿ ಪೊಲೀಸ್ ಪಡೆ,ಆದರ್ಶ ನಗರ ಪೊಲೀಸ್ ಠಾಣೆಯ ಪಿಎಸ್‍ಐ ಸೀತಾರಾಮ ಲಮಾಣಿ ಅವರು ಮುನ್ನೆಡೆಯ ನಾಗರಿಕ  ಪೊಲೀಸ್ ಪಡೆ,ಸಾಜರ್ಂಟ್ ಎ.ಡಿ ಮೋತಿಭಾಯಿ ಅವರ ನೇತೃತ್ವದ ಗೃಹರಕ್ಷಕ ದಳ,ಅರಣ್ಯ ಇಲಾಖೆ,ಎಎಸ್‍ಐ ಉಮೇಶ ತಳಕೇರಿ ಅವರು ಮುನ್ನೆಡೆಸಿದ ಅಗ್ನಿಶಾಮಕ ಇಲಾಖೆ,ಪ್ರಶಾಂತ ಕುಮಾರ್ ಅವರ ನೇತೃತ್ವದ ಸೈನಿಕ ಶಾಲೆ, ನಾಗರಾಜ್ ಮ್ಯಾಗೇರಿ ಅವರು ಮುನ್ನೆಡೆಸಿದ  ಎನ್ ಸಿ ಸಿ ಸೀನಿಯರ್ ಡಿವಿಜನ್,ಕು.ಈರಮ್ಮ ಅವಟಿ ಅವರ ಬಿಎಲ್‍ಡಿಇ ಬಾಲಕೀಯರ ಪ್ರೌಢಶಾಲಾ ತಂಡ,ಅರ್ಪಿತಾ ಅವಟಿ ಅವರ ನೇತೃತ್ವದ ದರ್ಗಾ ಶಾಲೆಯ ಕೆಜಿಎಚ್‍ಪಿಎಸ್ -12,ನೇಹಾ ಕಲ್ಯಾಣಿ ಅವರ  ಶಾಂತಿ ನಿಕೇತನ ಸಿಬಿಎಸ್ ಇಂಟರ್ ನ್ಯಾಶನಲ್ ಶಾಲೆಯ ತಂಡದ ನೇತೃತ್ವದಲ್ಲಿ ಪಥ ಚಲನ ನಡೆಯಿತು.


 ಭಾರತ ಸೇವಾ ದಳ ಮಹಾತ್ಮ ಗಾಂಧಿ ಪ್ರೌಢಶಾಲೆಯನ್ನು ಕು.ಅಥರ್ವಾ ಪೋಳ ಅವರು,ಸಂಜನಾ ಭೋವಿ ಅವರ ನೇತೃತ್ವದ ತೊರವಿಯ ಸರ್ಕಾರಿ ಸರ್ಕಾರಿ ಹೆಣ್ಣುಮಕ್ಕಳ ಮಾದರಿ  ಪ್ರಾಥಮಿಕ ಶಾಲೆ,ರುಕ್ಮಾಂಗದ ಪ್ರಾಥಮಿಕ ಶಾಲೆ, ಶೇರೋನ್ ಜೋಷಪ್ ಅವರ ನೇತೃತ್ವದ ಸೇಂಟ್‍ ಜೋಷೆಫ್ಫ್ ಶಾಲೆಯ ಗೈಡ್ಸ್ ತಂಡ,ಆದರ್ಶ ಕೋರಿಶೆಟ್ಟಿ ಮುಂದಾಳತ್ವದ ಗ್ಯಾಲಾಕ್ಸಿ ಶಾಲಾ ವಿಧ್ಯಾರ್ಥಿಗಳು,ಸುಪ್ರಿಯಾ ಮುಂದಾಳತ್ವದ ತೊರವಿಯ ಎಚ್ ಪಿಎಸ್ ಶಾಂತಿನಗರ,ಶ್ರೀಧರ ನಾವಿ ಅವರ ಸೇಂಟ್ ಜೋಷೆಫ್ ಶಾಲೆಯ ಸ್ಕೌಟ್ಸ್ ತಂಡವು ಶ್ರೀಮತಿ ವಿಜಯಲಕ್ಷ್ಮಿ ಸರ್ವೋತ್ತಮ ದೇಶಪಾಂಡೆ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆ, ಎಸ್ ಎಚ್ ಉತ್ಲಾಸರ ಹಾಗೂಅರ್ಜುನ ಭಜಂತ್ರಿ ಅವರ ನೇತೃತ್ವದ ಪೆÇಲೀಸ್ ವಾದ್ಯ ವೃಂದ ತಂಡ ಅತ್ಯಾಕರ್ಷಕ ಪಥಸಂಚಲನ ನಡೆಸಿ ನೋಡುಗರ ಮನಸೂರೆಗೊಂಡಿತು.

ಈ ಸಂದರ್ಭದಲ್ಲಿ  ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಕಾಂತಾ ನಾಯ್ಕ, ಮಹಾನಗರ ಪಾಲಿಕೆಯ ಮಹಾಪೌರರಾದ ಎಂ.ಎಸ್.ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕನಾನ್ ಮುಶ್ರೀಪ್,ಜಿಲ್ಲಾಧಿಕಾರಿ ಡಾ.ಆನಂದ.ಕೆ,ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಿಷಿ ಆನಂದ,ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿಗಳಾದ ಲಕ್ಷ್ಮಣ ನಿಂಬರಗಿ,ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು,ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Post a Comment

ನವೀನ ಹಳೆಯದು