ಮಾಜಿ ಸಿಎಂ ವಿಜಯ್ ರೂಪಾನಿ ಡಿಎನ್ಎ ಮ್ಯಾಚ್


ಅಹಮದಾಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಅವರ ಡಿಎನ್ಎ ಹೊಂದಾಣಿಕೆಯಾಗಿದೆ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಾಂಘವಿ ಭಾನುವಾರ ಮಾಹಿತಿ ನೀಡಿದರು. ಬೆಳಿಗ್ಗೆ 11.10 ಕ್ಕೆ ಬಂದ ಡಿಎನ್ಎ ವರದಿಯಲ್ಲಿ ದೃಢೀಕರಣ ಮಾಡಲಾಗಿದೆ. ಅವರ ಪಾರ್ಥಿವ ಶರೀರ ಪಡೆಯಲು ಮಾಜಿ ಸಿಎಂ ವಿಜಯ್ ರೂಪಾನಿ ಕುಟುಂಬಸ್ಥರು ಆಸ್ಪತ್ರೆಯ ಬಳಿ ನೆರೆದಿದ್ದಾರೆ. ಇಂದೇ ಅವರ ಅಂತ್ಯಕ್ರಿಯೆ ನೆರವೇರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Post a Comment

ನವೀನ ಹಳೆಯದು