Top News

ಮತ್ತೊಂದು ವಿಮಾನ ಪತನ: ಇಬ್ಬರು ಪಾರು


ಅಮೆರಿಕದ ಫ್ಲೋರಿಡಾ ರಾಜ್ಯದ ನೇಪಲ್ಸ್ ನ ಗೋಲ್ಡನ್ ಗೇಟ್ ಎಸ್ಟೇಟ್ ಬಳಿ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ವಿಮಾನವು ಗೋಲ್ಡನ್ ಗೇಟ್ ಬೌಲೆವಾರ್ಡ್ ಈಸ್ಟ್ ಮತ್ತು 6ನೇ ಅವೆನ್ಯೂ ಎಸ್ಇ ಮಧ್ಯೆ ಪತನಗೊಂಡಿದೆ. ವಿಮಾನದಲ್ಲಿ ಇಬ್ಬರು ಇದ್ದು, ಅವರು ಗಾಯಗಳಿಲ್ಲದೇ ಪಾರಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ವರದಿಗಳು ತಿಳಿಸಿವೆ. ಕೊಲಿಯರ್ ಕೌಂಟಿ ಶೆರಿಫ್ ಕಚೇರಿಯಿಂದ ಎಚ್ಚರಿಕೆ ನೀಡಲಾಗಿದೆ. ಕೆಟ್ಟ ಹವಾಮಾನವೇ ಅಪಘಾತಕ್ಕೆ ಕಾರಣವೆಂದು ಸ್ಥಳೀಯರು ಶಂಕಿಸಿದ್ದಾರೆ. ಅಧಿಕಾರಿಗಳಿಂದ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.

Post a Comment

ನವೀನ ಹಳೆಯದು