ಮಹಿಳೆಯರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅಶ್ಲೀಲ ವಿಷಯಗಳನ್ನು ಪೋಸ್ಟ್ ಮಾಡುತ್ತಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಸೋಮವಾರ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಬಂಧಿಸಿದ್ದಾರೆ. ಬಂಧಿತನನ್ನು ಶುಭಂಕುಮಾರ್ ಎಂದು ಗುರುತಿಸಲಾಗಿದೆ. ಇನ್ನು ಶುಭಂ ಮೊಬೈಲ್ ನಲ್ಲಿ ಬರೋಬ್ಬರಿ ಮಹಿಳೆಯರ 13,500 ಅಶ್ಲೀಲ ಫೋಟೊಗಳು ಪತ್ತೆಯಾಗಿವೆ. ಶುಭಂ ಮಹಿಳೆಯರಿಗೆ ನಗ್ನ ವಿಡಿಯೋ ಕಾಲ್ ಮಾಡಲು ಕಿರುಕುಳ ನೀಡುತ್ತಿದ್ದ. ಒಪ್ಪದರೆ ನಕಲಿ ಖಾತೆ ಸೃಷ್ಟಿಸಿ ಮಾನಹಾನಿ ಮಾಡುತ್ತಿದ್ದ. 100ಕ್ಕೂ ಹೆಚ್ಚು ಇಮೇಲ್ ಐಡಿಗಳು, ಸಾವಿರಾರು ಸ್ಟೀನ್ಶಾಟ್ಗಳು ಫೋನಿನಲ್ಲಿ ಪತ್ತೆಯಾಗಿವೆ. ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ನಕಲಿ ಖಾತೆ ತೆರೆದು ಅಶ್ಲೀಲ ಪೋಸ್ಟ್ ಮಾಡುತ್ತಿದ್ದ ವ್ಯಕ್ತಿ ಬಂಧನ
SAMARA VAANI
0

ಕಾಮೆಂಟ್ ಪೋಸ್ಟ್ ಮಾಡಿ