ಮಾಧ್ಯಮಗಳಲ್ಲಿ ಹಾಕಿ ನಮ್ಮ ಕೊಲೆ ಮಾಡುವ ಬದಲು ನನ್ನನ್ನೇ ನೇರವಾಗಿ ಕೇಳಬಹುದಿತ್ತು ಅಲ್ಲವಾ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಪ್ರಶ್ನಿಸಿದರು. ಬೆಂಗಳೂರಿನಲ್ಲಿಂದು ಖಾತೆ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳಿಗೆ ಏನು ಹೇಳಬೇಕೋ ಗೊತ್ತಿಲ್ಲ. ಯಾರು ನಿಮಗೆ ಹೇಳಿದರು ಹೇಳಿ. ನಿಮ್ಮ ಮೂಲ ಹೇಳಿ. ತಿಮ್ಮೇಗೌಡನೂ ಹೇಳೋದೆ ಬೊಮ್ಮೇಗೌಡನೂ ಹೇಳೋದೆ. ಯಾರು ಹೇಳಿದರು ನಿಮಗೆ? ನಿಮಗೆ ಮಾಹಿತಿ ಬಂದರೆ ನನ್ನ ಬಳಿಯೇ ಕೇಳಬಹುದಿತ್ತು ಎಂದರು.

ಕಾಮೆಂಟ್ ಪೋಸ್ಟ್ ಮಾಡಿ