ಬೈಕ್ ಗೆ ಇನ್ನೋವಾ ಕಾರ್ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು



ಬೈಕ್ ಗೆ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ-ದುಧನಿ ರಸ್ತೆಯಲ್ಲಿ ಸೋಮವಾರ ನಡೆದಿದೆ. ಬಳ್ಳೂರಗಿ ತಾಂಡಾ ನಿವಾಸಿ ವಿಕಾಸ್ ರಾಠೋಡ್ (25) ಮೃತ ಬೈಕ್ ಸವಾರ. ಸಂಬಂಧಿಕರನ್ನು ಬೈಕ್ ಮೇಲೆ ಅಫಜಲಪುರ ಪಟ್ಟಣಕ್ಕೆ ಬಿಟ್ಟು ಊರಿಗೆ ಮರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

ನವೀನ ಹಳೆಯದು