ಉತ್ತರಾಖಂಡದ ಕೇದಾರನಾಥ ಧಾಮ ಬಳಿ ಇಂದು ಬೆಳಿಗ್ಗೆ ಹೆಲಿಕಾಪ್ಟರ್ ಅಪಘಾತ ಸಂಭವಿಸಿದ್ದು, ತ್ರಿಜುಗಿನಾರಾಯಣ ನಾರಾಯಣ್ ಬಳಿ ಕೆಟ್ಟ ಹವಾಮಾನದಿಂದಾಗಿ ಈ ದುರಂತ ನಡೆದಿದೆ. ಆರ್ಯನ್ ಕಂಪನಿಗೆ ಸೇರಿದ ಹೆಲಿಕಾಪ್ಟರ್ ಕೇದಾರನಾಥದಿಂದ ಹಾರುತ್ತಿದ್ದ ವೇಳೆ ಅಪಘಾತವಾಗಿದ್ದು, ಹೆಲಿಕಾಪ್ಟರ್ ನಲ್ಲಿದ್ದ ಎಲ್ಲ 7 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ತಂಡಗಳು ಸ್ಥಳಕ್ಕೆ ದೌಡಾಯಿಸಿದ್ದು, ಎಡಿಜಿ ವಿ. ಮುರುಗೇಶನ್ ನೇತೃತ್ವದ ಪೊಲೀಸ್ ತಂಡವೂ ಸ್ಥಳಕ್ಕೆ ತೆರಳಿದೆ.
ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನ: ಏಳು ಮಂದಿ ದುರ್ಮರಣ
SAMARA VAANI
0

ಕಾಮೆಂಟ್ ಪೋಸ್ಟ್ ಮಾಡಿ