ಹೆಲಿಕಾಪ್ಟರ್ ದುರಂತದಿಂದ 8 ಸಂಸದರು, ಕುಟುಂಬಸ್ಥರು ಜಸ್ಟ್ ಮಿಸ್

ಹೆಲಿಕಾಪ್ಟರ್ ದುರಂತದಿಂದ ದೇಶದ ಎಂಟು ಸಂಸದರು, ಕುಟುಂಬಸ್ಥರು ಜಸ್ಟ್ ಮಿಸ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ನಿನ್ನೆ ಪತನಗೊಂಡ ಹೆಲಿಕಾಪ್ಟರ್ ಮೂಲಕ ಮೂಲಕ ಕೇದಾರನಾಥಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಪತ್ನಿ ಸುಮಿತ್ರಾ ಕಡಾಡಿ ಸೇರಿ 8 ಸಂಸದರು ತಮ್ಮ ಕುಟುಂಬಸ್ಥರೊಂದಿಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ ಹೆಲಿಪ್ಯಾಡ್ಗೆ ತಡವಾಗಿ ಬಂದ ಕಾರಣ ಆ ಹೆಲಿಕಾಪ್ಟರ್ ಬಿಟ್ಟು ಹಿಂದಿನ ಹೆಲಿಕಾಪ್ಟರ್ ಏರಿದ್ದರಿಂದ ಸಂಸದರು ಮತ್ತು ಅವರ ಕುಟುಂಬಸ್ಥರು ಬಚಾವ್ ಆಗಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಮಾವಲ್ ಕ್ಷೇತ್ರದ ಶಿವಸೇನೆ ಸಂಸದ ಶ್ರೀರಂಗ ಅಪ್ಪಾ ಬಾರ್ನೆ ಹಾಗೂ ಅವರ ಪತ್ನಿ, ಉತ್ತರ ಪ್ರದೇಶದ ಆಲಿಘಡ ಕ್ಷೇತ್ರದ ಬಿಜೆಪಿ ಸಂಸದ ಸತೀಶ್ ಗೌತಂ ಹಾಗೂ ಅವರ ಪತ್ನಿ, ಮಹಾರಾಷ್ಟ್ರ ಧಾರಸಿಂಹ ಕ್ಷೇತ್ರದ ಶಿವಸೇನೆ ಸಂಸದ ಓಂಪ್ರಕಾಶ ನಿಂಬಾಳ್ಕರ್ ಹಾಗೂ ಪತ್ನಿ, ಉತ್ತರ ಪ್ರದೇಶದ ರಾಜ್ಯಸಭೆ ಸದಸ್ಯೆ ಸಂಗೀತಾ ಯಾದವ್ ಹಾಗೂ ಅವರ ಪತಿ ಇದೇ ಹೆಲಿಕಾಪ್ಟರ್ ಮೂಲಕ ಕೇದಾರನಾಥ್​​ಗೆ ಪ್ರಯಾಣ ಬೆಳೆಸಬೇಕಿತ್ತು.

Post a Comment

ನವೀನ ಹಳೆಯದು