ಜಿಪ್ ಲೈನ್ ದುರಂತ: 30 ಅಡಿ ಕಂದಕಕ್ಕೆ ಬಿದ್ದು ಬಾಲಕಿಗೆ ಗಂಭೀರ ಗಾಯ


ಮನಾಲಿಯಲ್ಲಿ ಜಿಪ್ ಲೈನ್ ಸವಾರಿ ವೇಳೆ ಹಗ್ಗ ತುಂಡಾಗಿ 12 ವರ್ಷದ ಬಾಲಕಿ 30 ಅಡಿ ಆಳದ ಕಂದಕಕ್ಕೆ ಬಿದ್ದಿರುವ ಘಟನೆ ನಡೆದಿದ್ದು, ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ನಾಗ್ಪುರದ ತ್ರಿಶಾ ಬಿಜ್ವೆ ಎಂಬ ಬಾಲಕಿ ಕಳೆದ ವಾರ ತನ್ನ ಕುಟುಂಬದೊಂದಿಗೆ ಮನಾಲಿಗೆ ರಜೆಗೆ ಬಂದಿದ್ದಳು. ಜಿಪ್ ಲೈನ್ ವೇಳೆ ಅವಳು ಧರಿಸಿದ್ದ ಹಾರ್ನೆಸ್ಗೆ ಜೋಡಿಸಿದ್ದ ಹಗ್ಗ ತುಂಡಾಗಿ ಈ ಅಪಘಾತ ಸಂಭವಿಸಿದೆ. ಬಾಲಕಿ ಬಂಡೆಗಳ ಮೇಲೆ ಬಿದ್ದಿರುವ ಭಯಾನಕ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತೀವ್ರ ಗಾಯಗೊಂಡ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.



Post a Comment

ನವೀನ ಹಳೆಯದು