ಬೆಂಕಿ ತಗುಲಿ ವ್ಯಕ್ತಿ ಸಾವು: ಅತ್ತೆ, ಮಾವನ ವಿರುದ್ಧ ದೂರು ನೀಡಿದ ಪತ್ನಿ



ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮಂಡಾಡಿಜೆಡ್ಡು ಬಳಿ ವ್ಯಕ್ತಿಯೊಬ್ಬರು ಬೆಂಕಿ ತಗುಲಿ ಮೃತಪಟ್ಟ ಪ್ರಕರಣದಲ್ಲಿ ಸ್ಪೋಟಕ ಸಂಗತಿ ಬೆಳಕಿಗೆ ಬಂದಿದೆ. ಅಕ್ರಮವಾಗಿ ಗ್ಯಾಸ್ ರಿಫೀಲಿಂಗ್ ಮಾಡುತ್ತಿದ್ದು ವೇಳೆ ಅತ್ತೆ ಬೇಜವಾಬ್ದಾರಿಯಿಂದ ಲೈಟರ್ ಹಚ್ಚಿದ ಕಾರಣ ಬೆಂಕಿ ಹೊತ್ತಿಕೊಂಡು ಅನೂಪ್ ನಾಯಕ್ ಅವರಿಗೆ ಸುಟ್ಟ ಗಾಯಗಳಾಗಿ ಸಾವನ್ನಪ್ಪಿದ್ದಾರೆ. ಅವರ ತಂದೆ ಅನಂತನಾಯಕ್ ಮತ್ತು ತಾಯಿ ಆಶಾ ಅವರೇ ಇದಕ್ಕೆ ಕಾರಣವೆಂದು ಸೊಸೆ ರೇಷ್ಮಾ ಆರೋಸಿ ದೂರು ನೀಡಿದ್ದಾರೆ. ಅನೂಪ್ ಏ.11ರಂದು ಗ್ಯಾಸ್ ರಿಫಿಲ್ಲಿಂಗ್ ವೇಳೆ ಬೆಂಕಿ ತಗುಲಿ ಗಾಯಗೊಂಡು, ಏ.17ರಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.

Post a Comment

ನವೀನ ಹಳೆಯದು